• KABADDI

    Chamundi Vihar Outdoor Stadium, Mysore 10th to 12th October 2018

    Kabaddi is basically a combative two team sport, with four players on each side; it is played for a period of either 15 or 20 minutes with a 5 minutes break. The core idea of the game is to score points by raiding into the opponent's court and touching, tagging or wrestling as many defense players as possible without getting caught while holding their breath. The raider must then return to his half of the court on the same breath. The defenders would have formed a chain for example by linking arms, if this is broken then a member of that team is sent off. If the raider runs out of breath then they are sent off. Every time a player goes out the opposition gain a point. The team with the most points will be declared the winner. Kabaddi was incorporated into the Asian Games in 1990, the Asian Indoor Games in 2007 and the Asian Beach Games in 2008.

    ಕಬಡ್ಡಿ: ಕಬಡ್ಡಿ ಮೂಲತಃ ರಣತಂತ್ರಾತ್ಮಕ ಕ್ರೀಡೆಯಾಗಿದ್ದು ಎರಡು ತಂಡಗಳಿಂದ ಆಡಲ್ಪಡುತ್ತದೆ. ಪ್ರತಿ ತಂಡದಲ್ಲಿ ನಾಲ್ಕು ಆಟಗಾರರಿರುತ್ತಾರೆ. ಈ ಕ್ರೀಡೆಯನ್ನು 5 ನಿಮಿಷಗಳ ವಿಶ್ರಾಂತಿಯೊಂದಿಗೆ 15 ರಿಂದ 20 ನಿಮಿಷಗಳ ಕಾಲ ಆಡಲಾಗುತ್ತದೆ. ಈ ಕ್ರೀಡೆಯ ಮುಖ್ಯ ಉದ್ದೇಶವೆಂದರೆ ಪ್ರತಿಸ್ಪರ್ಧಿಯ ಅಂಗಳದಲ್ಲಿ ದಾಳೀ ಮಾಡಿ ಜಿಗಿತ, ನೆಗೆತ ಅಥವಾ ಕುಸ್ತಿಯಂತಹ ಬಾಹ್ಯಿಕ ಚಟುವಟಿಕೆಗಳ ಮೂಲಕ ವಿರುದ್ಧ ತಂಡದ ಆಟಗಾರರಲ್ಲಿ ಯಾರನ್ನಾದರೂ ಸ್ಪರ್ಶಿಸಿ ಅವರ ಬಳಿ ಸಿಲುಕಿ ಹಾಕಿಕೊಳ್ಳದೆ ಮತ್ತೆ ತಮ್ಮ ಅಂಗಳಕ್ಕೆ ಒಂದೆ ದೀರ್ಘ ಉಸಿರಿನಲ್ಲಿ ಮಾಡಿ ಬರಬೇಕು. ಪ್ರತಿಸ್ಪರ್ಧಿ ತಂಡದ ಆಟಗಾರರು ಆಕ್ರಮಣ ಮಾಡಿದ ಆಟಗಾರನನ್ನು ಶತಾಯಗತಾಯವಾಗಿ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ಅವರು ತಮ್ಮ ತಮ್ಮ ಕೈಗಳನ್ನು ಹಿಡಿದು ಸರಪಳಿಯನ್ನು ರೂಪಿಸುತ್ತಾರೆ. ಆಕ್ರಮಣ ಮಾಡಿರುವ ಆಟಗಾರ ಉಸಿರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಗದೆ ಇದ್ದಲ್ಲಿ ಅವನು ಮತ್ತೆ ತನ್ನ ತಂಡಕ್ಕೆ ಮರಳಬಹುದು. ಆದರೆ ಪ್ರತಿಸ್ಪರ್ಧಿ ತಂಡವು ಇದರಿಂದ ಅಂಕಗಳಿಸುತ್ತದೆ. ಹೆಚ್ಚು ಅಂಕಗಳಿಸುವ ತಂಡ ಜಯಶಾಲಿಯಾಗುತ್ತದೆ. ಕಬಡ್ಡಿ ಆಟವನ್ನು ಮೊದಲ ಬಾರಿಗೆ ಏಷಿಯನ್ ಗೇಮ್ಸ್ ನಲ್ಲಿ 1990 ರಲ್ಲಿ, ಏಷಿಯನ್ ಇಂಡೋರ್ ಗೇಮ್ಸ್ ನಲ್ಲಿ 2007 ರಲ್ಲಿ ಹಾಗೂ ಏಷಿಯನ್ ಬೀಚ್ ಗೇಮ್ಸ್ ನಲ್ಲಿ 2008 ರಲ್ಲಿ ಸೇರಿಸಲಾಯಿತು.



  • More information


    Competition Director(s): Shivalingappa, 97384 11371 (M) [Karnataka Rajya Amateur Kabaddi Association]