• BOXING

    Chamundi Vihar Stadium, Mysore 11th to 14th October 2018

    Boxing is a combat sport played by two opponents of a similar build and ability who fight against each other using their fists which are covered by gloves. Boxing is supervised by a referee and is broken down into rounds. Victory is achieved if the opponent is knocked down and unable to get up before the referee counts to ten seconds, this is known as a Knockout. If the fight is not stopped before an agreed number of rounds, a winner is determined either by the referee's decision or by judge's scorecards. Amateur boxing is both an Olympic and Commonwealth Games sport and is a common fixture in most international games - it also has its own World Championships.There are numerous variations and styles of boxing practiced around the world each having rules which are slightly different. It has been contested at every Summer Olympic Games since its introduction to the program at the 1904 Summer Olympics, except for the 1912. Boxing was first incorporated into the Asian Games in 1954.

    ಬಾಕ್ಸಿಂಗ್: ಇದೊಂದು ಯುದ್ಧ ರೀತಿಯ ಕ್ರೀಡೆಯಾಗಿದ್ದು ಇದರಲ್ಲಿ ಇಬ್ಬರು ಸ್ಪರ್ಧಿಗಳು ಕೈಗವಸುಗಳನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಕಾದಾಡುತ್ತಾರೆ. ಈ ಕಾದಾಟದ ಕ್ರೀಡೆಯು ಮೇಲ್ವಿಚಾರಕನೊಬ್ಬನ ನಿರ್ವಹಣೆಯಲ್ಲಿ ನಡೆಯುತ್ತದೆ ಹಾಗೂ ಹಲವು ಸುತ್ತುಗಳಲ್ಲಿ ಇದು ವಿಭಾಗಿಸಲ್ಪಟ್ಟಿರುತ್ತದೆ. ಮುಷ್ಟಿ ಹೊಡೆತ ತಿಂದು ಸ್ಪರ್ಧಿಯು ಕೆಳಗೆ ಬಿದ್ದು ತೀರ್ಪುಗಾರ ಹತ್ತು ಸಂಖ್ಯೆಗಳವರೆಗೆ ಎಣಿಸಿದರೂ ಏಳಲು ಶಕ್ತವಾಗದಿದ್ದಲ್ಲಿ ಈ ಆಟ ಮುಗಿದಂತೆ ಹಾಗೂ ಕೆಳಗೆ ಬೀಳಿಸಿದವ ಸ್ಪರ್ಧಿ ಗೆದ್ದಂತೆ. ಇದನ್ನು ನಾಕೌಟ್ ಎಂದು ಕರೆಯುತ್ತಾರೆ. ನಿಶ್ಚಯಿಸಿದ ಸುತ್ತುಗಳು ಮುಗಿದ ಮೇಲೂ ಕಾದಾಟ ಹಾಗೆ ಮುಂದುವರೆದರೆ ಆಗ ಮೇಲ್ವಿಚಾರಕನ ನಿರ್ಧಾರ ಅಥವಾ ತೀರ್ಪುಗಾರರ ಅಂಕಗಳ ಆಧಾರದ ಮೇಲೆ ಜಯಶಾಲಿಯನ್ನು ನಿರ್ಧರಿಸಲಾಗುತ್ತದೆ. ಹವ್ಯಾಸಿ ಬಾಕ್ಸಿಂಗ್ ಕ್ರೀಡೆಯು ಒಲಿಂಪಿಕ್ ಹಾಗೂ ಕಾಮನ್ ವೆಲ್ತ್ ಗೇಮ್ಸ್ ಗಳ ಭಾಗವಾಗಿದ್ದು ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಸಾಮಾನ್ಯವಾಗಿ ಆಡಲಾಗುವ ಪಂದ್ಯಾವಳಿಯಾಗಿದೆ. ಅಲ್ಲದೆ ಇದು ತನ್ನದೆ ಆದ ವಿಶ್ವಚಾಂಪಿಯನ್ ಪಂದ್ಯಾವಳಿಗಳನ್ನೂ ಸಹ ಹೊಂದಿದೆ. ಜಾಗತಿಕ ಮಟ್ಟದಲ್ಲಿ ಬಾಕ್ಸಿಂಗ್ ಕ್ರೀಡೆಯನ್ನು ಹಲವು ಬಗೆಗಳಲ್ಲಿ ಹಾಗೂ ಶೈಲಿಗಳಲ್ಲಿ ಆಡಲಾಗುತ್ತಿದ್ದು ಎಲ್ಲವೂ ಹೆಚ್ಚು ಕಡಿಮೆ ಒಂದೆ ರೀತಿಯ ನಿಯಮಗಳನ್ನು ಹೊಂದಿದ್ದರೂ ತುಸು ವ್ಯತ್ಯಾಸಗಳನ್ನು ಹೊಂದಿರುವುದು ಕಾಣಬಹುದು. 1912 ಒಂದನ್ನು ಹೊರತುಪಡಿಸಿ 1904 ರಿಂದ ನಡೇದುಕೊಂಡು ಬಂದಿರುವ ಸಮರ್ ಒಲಿಂಪಿಕ್ ಕ್ರೀಡೆಗಳಲ್ಲಿ ಬಾಕ್ಸಿಂಗ್ ಪಂದ್ಯಗಳನ್ನು ಆಡಲಾಗುತ್ತಿದೆ. 1954 ರ ಏಷಿಯನ್ ಗೇಮ್ಸ್ ನಲ್ಲಿ ಮೊದಲ ಬಾರಿಗೆ ಬಾಕ್ಸಿಂಗ್ ಸೇರಿಸಲಾಯಿತು.



  • More information


    Competition Director(s): Capt Narayan, 97392 62732 (M) [Karnataka Amateur Boxing Association]